ಅವಳ ನೆನಪೆಂದರೆ......
ಬಿಳಿಯ ಹಾಳೆಯ ಮೇಲೆ
ಬರೆದು ಹರಿದು ಬಿಸಾಡಿದ
ಕರಿಯ ಪೆನ್ನಿನ ಶಾಯಿ!
ಅವಳ ನೆನಪೆಂದರೆ......
ಮುಸ್ಸಂಜೆಯಲಿ ಮುಗಿಲು ನೋಡುತ್ತ
ಜಗವ ಮರೆತು
ಸಂಗಾತಿಯ ನೆನೆದು ಊಳಿಡುವ ನಾಯಿ!
ಅವಳ ನೆನಪೆಂದರೆ......
ನೀರೆದೆಯ ಸೀಳಿಹೋದ
ನೂರಾರು ಕರಿ ಮೈಯ
ಕಂಕುಳ ಬೆವರು ತುಂಬಿದ ಹಾಯಿ!
ಅವಳ ನೆನಪೆಂದರೆ......
ವರ್ಷಕ್ಕೊಮ್ಮೆ ಪಿತೃಗಳಿಗೆ ಗದ್ದೆಯ ಮಧ್ಯ
ಪಿಂಡವಿಕ್ಕಿ ಕಾಗೆಯ ಕರೆದು
ಅಪ್ಪ ಹಾಕಿದ ಹಾಯಿ!
ಅವಳ ನೆನಪೆಂದರೆ......
ಅಡಕೆ ಹೆಕ್ಕಲು ಹೋಗಿ
ವಿಶ್ರಮಿಸಿದವನ ತಲೆಯ ಮೇಲೆ
ಬಿದ್ದೊಡೆದ ತೆಂಗಿನ ಕಾಯಿ!
ಅವಳ ನೆನಪೆಂದರೆ......
ಸಾಕಪ್ಪಾ ಸಾಕು
ತೊಳೆಯಬೇಕು ಒಮ್ಮೆ
ತುಂಬ ಕೊಳೆಯಾಗಿದೆ
ಅವಳ ನೆನಪೆಂಬ ಶರಾಯಿ!
ಬಿಳಿಯ ಹಾಳೆಯ ಮೇಲೆ
ಬರೆದು ಹರಿದು ಬಿಸಾಡಿದ
ಕರಿಯ ಪೆನ್ನಿನ ಶಾಯಿ!
ಅವಳ ನೆನಪೆಂದರೆ......
ಮುಸ್ಸಂಜೆಯಲಿ ಮುಗಿಲು ನೋಡುತ್ತ
ಜಗವ ಮರೆತು
ಸಂಗಾತಿಯ ನೆನೆದು ಊಳಿಡುವ ನಾಯಿ!
ಅವಳ ನೆನಪೆಂದರೆ......
ನೀರೆದೆಯ ಸೀಳಿಹೋದ
ನೂರಾರು ಕರಿ ಮೈಯ
ಕಂಕುಳ ಬೆವರು ತುಂಬಿದ ಹಾಯಿ!
ಅವಳ ನೆನಪೆಂದರೆ......
ವರ್ಷಕ್ಕೊಮ್ಮೆ ಪಿತೃಗಳಿಗೆ ಗದ್ದೆಯ ಮಧ್ಯ
ಪಿಂಡವಿಕ್ಕಿ ಕಾಗೆಯ ಕರೆದು
ಅಪ್ಪ ಹಾಕಿದ ಹಾಯಿ!
ಅವಳ ನೆನಪೆಂದರೆ......
ಅಡಕೆ ಹೆಕ್ಕಲು ಹೋಗಿ
ವಿಶ್ರಮಿಸಿದವನ ತಲೆಯ ಮೇಲೆ
ಬಿದ್ದೊಡೆದ ತೆಂಗಿನ ಕಾಯಿ!
ಅವಳ ನೆನಪೆಂದರೆ......
ಸಾಕಪ್ಪಾ ಸಾಕು
ತೊಳೆಯಬೇಕು ಒಮ್ಮೆ
ತುಂಬ ಕೊಳೆಯಾಗಿದೆ
ಅವಳ ನೆನಪೆಂಬ ಶರಾಯಿ!
chennaagide....
ReplyDelete