Sunday, October 16, 2011

ಮುಗಿಯಿತು ಕತೆ

ನಡುರಾತ್ರಿಯಲಿ ಅರ್ಧವೇ ಬಾಗಿಲು ತೆರೆದು ಸ್ವಾಗತಿಸಿದವಳ ಮನೆಯಿಂದ ಅರ್ಧವೇ ಬಾಗಿಲು ತೆರೆದು ಹೊರಬಿದ್ದ ಅವಳ ಆಗಂತುಕನ ಹೆಸರು ಬಾಲಚಂದ್ರ. ಮೊನ್ನೆ ಅಘನಾಶಿನಿ ನದಿಯ ಬ್ರಿಜ್ಜಿನ ತುದಿಗೆ ನೀರು ನಿಂತು ಕುಡಿಯಲಿಕ್ಕೆ ಸಿಗ್ಗಿಲ್ಲ ಉಚ್ಚೆ ಹೊಯ್ಯಲಿಕ್ಕೆನು ಸಿಗ್ಗು? ಎಂದು ಅರ್ಧ ಪ್ಯಾಂಟು ಇಳಿಸಿ ಹೋ...... ಎಂದು ಉಚ್ಚಿ ಹೊಯ್ದ ಭೂಪ. 'ನಿನಗೆ ಇದು ಗೊತ್ತುಂಟಾ? ಮೊಬೈಲು. ಇದರ ಮರುಳು ಈಗ ಲೋಕದ ತುಂಬಾ ಉಂಟು. ಇದು ಭಾರಿ ಹುಷಾರು. ವಾಯರು ಬೇಡ ಎಂತದು ಬೇಡ. ಟೇಪ್ ರೆಕಾರ್ಡರು ಉಂಟಲ್ಲ. ಅದರಲ್ಲಿ ಹಾಡು ಮುಗಿದರೆ ನಾವು ಎದ್ದು ಬಂದ್ ಮಾಡ್ಬೇಕಾಗ್ತದೆ. ಇದು ಹಾಂಗಲ್ಲ. ಅದೇ ಬಂದ್ ಆಗ್ತದೆ' ಎಂದು ಹಾಲಕ್ಕಿ ಗೌಡನ ತಲೆಗೆ ಬರೋಬ್ಬರಿ ಕೊಬ್ಬರಿ ಎಣ್ಣೆಯ ಹಾಕಿ ಸಾವಿರದ ಮೊಬೈಲನ್ನು ಮೂರು ಸಾವಿರಕ್ಕೆ ಮಾಆರಿದ ಪುಡಿಗಂಡು. ತನ್ನ ಬಿಕನಾಸಿ ಅಬ್ಬೆಗೆ ಕೊಟ್ಟೆ ಸಾರಾಯಿ ಚೀಪಲು ಕೊಟ್ಟು ಅವಳಿಗೆ ಬರುವ ಮಾಶಾಸನವನ್ನೆಲ್ಲ ಗುಂಪುಮಾಡಿ ಒಂದಂತಸ್ತಿನ ಮನೆಯನ್ನೇ ಕಟ್ಟಿದ ಕಲ್ಕುಟಿಕ. ನಾಮ ಮರುಚಿಸಲಾಗಿದೆ.
ಖೈರೆ ಘಟ್ಟದ ಜಲಪಾತದ ಕೆಳಗೆ ಮೋರಿಯ ಮೇಲೆ ಒಂದು ಕೈಯಲ್ಲಿ ಇನ್ನೂರು ವ್ಯಾಟಿನ ಬಲ್ಬು ಇನ್ನೊಂದು ಕೈಯಲ್ಲಿ ಹಸುರು-ಕೆಂಪು ತಿರುಪಿನ ವಾಯರು ತುದಿಯನ್ನು ಜಲಪಾತದ ಬುಡದಲ್ಲಿ ಹಾಕಿಕೊಂಡು ಮೋರಿಯ ಮೇಲೆ ಕುಳಿತ ಬೋಜ್ಜೆಶ್ವರ ರಸ್ತೆಯಲ್ಲಿ ಹೋಗಿ ಬರುತ್ತಿದ್ದ ಶಾಲೆ ಮಕ್ಕಳ ಕರೆದು, ನೋಡಾ, ಐದು ನಿಮಿಷ, ಈಗ ಕರೆಂಟು ಬರ್ತದೆ... ಎಂದಾಗ ನಡೆದು ಹೋಗುತ್ತಿದ್ದವರು ಓಡಿಯೇ ಪರಾರಿ. 
ಇಂತಿಪ್ಪ, ಖಾಲಿ ಕಾಗದದ ಮೇಲೊಂದು ಕರಿಯ ಶಾಯಿಯ ಬಿಂದುವೊಂದು ಬಿದ್ದಂತೆ....... ಬಾಲಚಂದ್ರನಿಗೊಂದು ಓಮಿನಿ!
ಓಂ ಬೀಚಿನಲ್ಲಿ ಫಾರಿನು ಹೆಂಗಸರ ಚೆಡ್ಡಿ ಕಿಸೆಯಿಂದ ಐ ಪೇಡುಗಳನ್ನೂ ಗಂಡಸ ಚೆಡ್ಡಿ ಕಿಸೆಯಿಂದ ' 'ಗಳನ್ನೂ ಕದ್ದೇಬಿಡುವಂತಹ ನಿಷ್ಣಾತ ಮಗನ ಕತೆಯ ಬದಿಗಿರಿಸಿ.....
ವಾರದ ಹಿಂದಷ್ಟೇ, ಕೈಕೊಟ್ಟ ಹೃದಯವ ಗೌರವಿಸಿ ಸ್ವರ್ಗವಾಸಿಯದವನಿಗೆ ಚಿರಶಾಂತಿಯ ಧೂಪ ಹಚ್ಚಿ ತಲೆಯೆತ್ತಿ ಕೈಮೇಲೆ ಮಾಡಿ ಟಾಟಾ ಮಾಡುತ್ತಾ.......


ವಿ.ಸೂ: ಮೇಲಿನ ಸಾಲುಗಳು ಯಾರಿಗೂ ಸಂಬಂಧ ಪಡದೇ ಹೋದರೆ ಅದು ಕೇವಲ ಕಾಕತಾಳೀಯವಷ್ಟೇ.!

1 comment:

  1. ಸೂಪರು.. ಕೊನೆಯ ವಿ.ಸೂ ಯು ಮಸ್ತ್ :-)

    ReplyDelete