
ಖೈರೆ ಘಟ್ಟದ ಜಲಪಾತದ ಕೆಳಗೆ ಮೋರಿಯ ಮೇಲೆ ಒಂದು ಕೈಯಲ್ಲಿ ಇನ್ನೂರು ವ್ಯಾಟಿನ ಬಲ್ಬು ಇನ್ನೊಂದು ಕೈಯಲ್ಲಿ ಹಸುರು-ಕೆಂಪು ತಿರುಪಿನ ವಾಯರು ತುದಿಯನ್ನು ಜಲಪಾತದ ಬುಡದಲ್ಲಿ ಹಾಕಿಕೊಂಡು ಮೋರಿಯ ಮೇಲೆ ಕುಳಿತ ಬೋಜ್ಜೆಶ್ವರ ರಸ್ತೆಯಲ್ಲಿ ಹೋಗಿ ಬರುತ್ತಿದ್ದ ಶಾಲೆ ಮಕ್ಕಳ ಕರೆದು, ನೋಡಾ, ಐದು ನಿಮಿಷ, ಈಗ ಕರೆಂಟು ಬರ್ತದೆ... ಎಂದಾಗ ನಡೆದು ಹೋಗುತ್ತಿದ್ದವರು ಓಡಿಯೇ ಪರಾರಿ.
ಇಂತಿಪ್ಪ, ಖಾಲಿ ಕಾಗದದ ಮೇಲೊಂದು ಕರಿಯ ಶಾಯಿಯ ಬಿಂದುವೊಂದು ಬಿದ್ದಂತೆ....... ಬಾಲಚಂದ್ರನಿಗೊಂದು ಓಮಿನಿ!
ಓಂ ಬೀಚಿನಲ್ಲಿ ಫಾರಿನು ಹೆಂಗಸರ ಚೆಡ್ಡಿ ಕಿಸೆಯಿಂದ ಐ ಪೇಡುಗಳನ್ನೂ ಗಂಡಸ ಚೆಡ್ಡಿ ಕಿಸೆಯಿಂದ ' 'ಗಳನ್ನೂ ಕದ್ದೇಬಿಡುವಂತಹ ನಿಷ್ಣಾತ ಮಗನ ಕತೆಯ ಬದಿಗಿರಿಸಿ.....
ವಾರದ ಹಿಂದಷ್ಟೇ, ಕೈಕೊಟ್ಟ ಹೃದಯವ ಗೌರವಿಸಿ ಸ್ವರ್ಗವಾಸಿಯದವನಿಗೆ ಚಿರಶಾಂತಿಯ ಧೂಪ ಹಚ್ಚಿ ತಲೆಯೆತ್ತಿ ಕೈಮೇಲೆ ಮಾಡಿ ಟಾಟಾ ಮಾಡುತ್ತಾ.......
ವಿ.ಸೂ: ಮೇಲಿನ ಸಾಲುಗಳು ಯಾರಿಗೂ ಸಂಬಂಧ ಪಡದೇ ಹೋದರೆ ಅದು ಕೇವಲ ಕಾಕತಾಳೀಯವಷ್ಟೇ.!